ಶಾಂತಿಗಾಗಿ ವಿವಾಹ

20.00

Category:

ವರದಕ್ಷಿಣೆ ಪದ್ಧತಿ ಎಲ್ಲಿಂದ, ಯಾರಿಂದ,ಯಾವಾಗ, ಯಾಕೆ ಜಾರಿಗೆ ಬಂದಿತು ಎಂಬುದು ಸ್ಪಷ್ಟವಿಲ್ಲದಿದ್ದರೂ ನಮ್ಮ ದೇಶದ ಎಲ್ಲಾ ಧರ್ಮೀಯರೂ, ವರ್ಗ, ವರ್ಣ ಭೇದವಿಲ್ಲದೆ ಈ ಅನಿಷ್ಟ ಪದ್ಧತಿಯನ್ನು ವಿವಾಹದ ಒಂದು ಭಾಗವಾಗಿ ಆಚರಿಸುತ್ತಿದ್ದಾರೆ ಎಂಬುದು ಸ್ಪಷ್ಟ. ಆದರೆ ಇಸ್ಲಾಮ್ ಧರ್ಮದ ಮೂಲಗಳಾದ ಕುರ್‌ಆನ್ ಮತ್ತು ಪ್ರವಾದಿ ವಚನಗಳಲ್ಲಿ ವರದಕ್ಷಿಣೆಯ ಪ್ರಸ್ತಾಪವೇ ಇಲ್ಲ. ಬದಲಾಗಿ ಹಣಕ್ಕಾಗಿ ವಿವಾಹವಾಗುವುದನ್ನು ಅದು ವಿರೋಧಿಸುತ್ತದೆ. ವಿವಾಹದಲ್ಲಿ ಸಂಪತಿನ ಯಾವ ಪಾತ್ರವೂ ಇರುವುದಿಲ್ಲ. ಮುಸ್ಲಿಮ್ ಸಮಾಜದಲ್ಲಿ ವರದಕ್ಷಿಣೆ ಎಂಬುದು ಖಂಡಿತವಾಗಿ ಆ ಸಮಾಜದ ಸಂಸ್ಕೃತಿಯಲ್ಲ. ಇಲ್ಲಿ ಯಾವ ಸಮಾಜ ಅದಕ್ಕೆ ಕಾರಣವಾಗಿದೆ ಎಂದು ವಿಶ್ಲೇಷಿಸುವುದಕ್ಕಿಂತ ಎಲ್ಲಾ ಸಮಾಜ ವರದಕ್ಷಿಣೆ ಎಂಬ ಸಾಮಾಜಿಕ ಪಿಡುಗಿಗೆ ಬಲಿಯಾಗಿದೆ ಎಂಬ ವಾಸ್ತವವನ್ನು ಮುಂದಿಟ್ಟುಕೊAಡು ಚರ್ಚಿಸುವುದು ಅಗತ್ಯ.