ಅನ್ಫಾಲ್

60.00

Category:

ಸೃಷ್ಟಿ ಮತ್ತು ಸೃಷ್ಟಿಕರ್ತನ ಮಧ್ಯೆಯಿರುವ ಸಂಬಂಧವೆಂದರೆ ಬರಿಯ ಆಚಾರ ಅನುಷ್ಠಾನಗಳಿಗೆ ಸೀಮಿತಗೊಂಡ ವಿಚಾರ ಮಾತ್ರವಲ್ಲ. ಸ್ವಂತ ದೇಹ, ಕುಟುಂಬ ಮತ್ತು ಪರಿಸರದ ಸುತ್ತ ಮಾಡಿ ಮುಗಿಸಬೇಕಾದ ಬಾಧ್ಯತೆಯೊಂದಿಗೆ ಓರ್ವ ವ್ಯಕ್ತಿಯ ದೇವನೊಂದಿಗಿರುವ ಬಾಧ್ಯತೆಯು ಹಾಸುಹೊಕ್ಕಾಗಿದೆ. ಭೂಮಿಯ ಮೇಲೆ ಅಲ್ಲಾಹನ ಪ್ರತಿನಿಧಿಯಾಗೆಬೇಕೆಂಬ ಗುರಿಯನ್ನು ತಲುಪುವ ವೇಳೆವಿಶ್ವಾಸಿಗೆ ಸ್ವಂತದ ಪ್ರಾಮುಖ್ಯತೆ ನಷ್ಟಗೊಳ್ಳುತ್ತದೆ. ದೇವಾಜ್ಞೆಗೆ ಸಂಪೂರ್ಣವಾಗಿ ವಿಧೇಯನಾಗುವ ವ್ಯಕ್ತಿ ಅಂತಿಮವಾಗಿ ಅಲ್ಲಾಹನ ಆಯುಧವಾಗಿ ಮಾರ್ಪಡುತ್ತಾನೆ. ಈ ಆಯುಧಗಳನ್ನು ಉಪಯೋಗಿಸಿ ಅಲ್ಲಾಹನು ತನ್ನ ಕೆಲವು ತೀರ್ಮಾನಗಳನ್ನು ಮಾನವನ ಮಧ್ಯೆಜಾರಿಗೊಳಿಸುತ್ತಾನೆ.