ಈದಿನ ಚಂದಿರ

50.00

Category:

ಮುಸ್ಲಿಮ್ ಸಮಾಜದ ಬದುಕು-ಧರ್ಮ-ಸಂಸ್ಕೃತಿಯನ್ನು ಬಿಂಬಿಸುವ ವೇಳೆ ಹೆಚ್ಚಿನ ಬರಹಗಳಲ್ಲಿ ಅದೇನೋ ಪೂರ್ವಗ್ರಹದ ಛಾಪು ಇರುವುದನ್ನು ಗಮನಿಸಬಹುದು. ಆದರೆ “ಈದಿನ ಚಂದಿರ’’ದಲ್ಲಿ ಕತೆಗಾರ ಮುಸ್ಲಿಮರ ಬದುಕಿನ ನೈಜ ಮಗ್ಗುಲನ್ನು ಅನಾವರಣಗೊಳಿಸುವಲ್ಲಿ ಒಂದು ಹಂತದವರೆಗೆ ಸಫಲರಾಗಿದ್ದಾರೆ. ಧಾರ್ಮಿಕವಲ್ಲದ ಹತ್ತು ಹಲವು ಆಚಾರ ವಿಚಾರಗಳನ್ನು ತಮ್ಮ ಮೇಲೆ ಹೇರಿಕೊಂಡ ಮುಸ್ಲಿಮ್ ಸಮಾಜದ ಧರ್ಮಸಂಕಟವನ್ನು ಕತೆಗಾರ ಮಾರ್ಮಿಕವಾಗಿ ವಿವರಿಸುತ್ತಾರೆ. ಒಂದು ಕತೆಯಿಂದ ಸಮಾಜದ ಬದಲಾವಣೆಯು ಸಾಧ್ಯ ಎಂಬ ದೊಡ್ಡ ಮಾತನ್ನು ಹೊರತುಪಡಿಸಿದರೂ, ಸಮಾಜದ ಲೋಪ ದೋಷಗಳನ್ನು ಒಂದಿನಿತು ತಿದ್ದಿಕೊಳ್ಳಲಾದರೂ ಈ ಕತೆಯು ಸಹಾಯಕವಾದೀತು.