ಹಿಜಾಬ್: ವಿರೋಧಗಳ ರಾಜಕೀಯ

50.00

Category:

ಇಸ್ಲಾಮ್ ಮಹಿಳೆಯರನ್ನು ದಮನಿಸುತ್ತಿದೆ ಎಂದು ಟೀಕಿಸುತ್ತಿರುವ ಪಾಶ್ಚಾತ್ಯರು ಮಹಿಳೆಯರ ಶೋಷಣೆಯಲ್ಲೂ ಮಂಚೂಣಿಯಲ್ಲಿದ್ದಾರೆ. ಅದೇ ವೇಳೆ ಪೌರಾತ್ಯರು ಅವರನ್ನು ದೇವತೆಗಳೆಂದು ಎತ್ತರಿಸಿ ಶೋಷಿಸುತ್ತಿದ್ದಾರೆ. ಆದರೆ ಈ ಎರಡೂ ಗುಂಪುಗಳು ಪರ್ದಾ, ಹಿಜಾಬ್ ಅಥವಾ ಬುರ್ಖಾ ಎಂಬ ಪ್ರತೀಕವನ್ನು ಸಮಾನವಾಗಿ ಬಳಸುತ್ತಿವೆ. ಈ ಮಧ್ಯೆ ಕ್ಯಾಥರಿಕ್ ಬುಲ್ಲೋಕ್, ಹಿಜಾಬ್ ಎಂಬುದು ಇಸ್ಲಾಮ್ ಮಹಿಳೆಯರಿಗೆ ಆದೇಶಿಸಿದ ಒಂದು ವಸ್ತ್ರ ಸಂಹಿತೆಯಾಗಿದೆ ಮತ್ತು ವಿವಿಧ ಪ್ರದೇಶಗಳಲ್ಲಿ ಅದು ರಕ್ಷಣಾ ಪ್ರಜ್ಞೆಯ, ಸ್ವಾತಂತ್ರದ, ಅಸ್ಮಿತೆಯ ಪ್ರತೀಕವಾಗಿದೆ ಎಂಬುದನ್ನು ತನ್ನ ಅಧ್ಯಯನದಲ್ಲಿ ಕಂಡುಕೊಂಡರು. ಬುಲ್ಲೋಕ್ ತನ್ನ ಅಧ್ಯಯನವನ್ನು ‘‘ರೀಥಿಂಕಿಂಗ್ ಮುಸ್ಲಿಮ್ ವಿಮೆನ್ ಆ್ಯಂಡ್ ದ ವೈರಲ್’’ ಎಂಬ ಹೆಸರಿನ ಪುಸ್ತಕದಲ್ಲಿ ಪ್ರಕಟಿಸಿದರು. ಈ ಕೃತಿಯು ಅದರ ಸಂಗ್ರಹವಾಗಿದೆ.