ಇಸ್ಲಾಮ್: ಆದರ್ಶ ನಿಯೋಗ ಆಂದೋಲನ

100.00

Category:

ಸಾಮಾಜಿಕ ಜೀವನದ ವಿವಿಧ ಕ್ಷೇತ್ರಗಳನ್ನು ಪರಿಧಿಯಿಂದ ಹೊರಗಿಡುತ್ತಾ, ಧರ್ಮವನ್ನುಅಲೌಕಿಕವಾದವುಗಳೊಂದಿಗೆ ಮಾನವನ ಸಮಗ್ರ ಆಧ್ಯಾತ್ಮಿಕ ಸಂಬಂಧ ಎಂಬುದಾಗಿ ಅರ್ಥೈಸಲಾಗುತ್ತದೆ. ಆದರೆ ಧರ್ಮವನ್ನು ಈ ರೀತಿ ಸೀಮಿತರೇಖೆಯೊಳಗೆ ವ್ಯಾಖ್ಯಾನಿಸಲು ಇಸ್ಲಾಮ್ ನಿರಾಕರಿಸುತ್ತದೆ. ಇಸ್ಲಾಮ್ ಏಕ ದೇವ ವಿಶ್ವಾಸದ ದಿವ್ಯ ಸಿದ್ಧಾಂತತವನ್ನು ಹೊಂದಿದೆ. ಅದು ವೈಯಕ್ತಿಕ ಮತ್ತು ಸಾರ್ವಜನಿಕ ಜೀವನದ ಎಲ್ಲಾ ಆಯಾಮಗಳನ್ನು ವ್ಯವಸ್ಥಿತಗೊಳಿಸುವ ಉದ್ದೇಶವನ್ನು ಹೊಂದಿದೆ. ಇಸ್ಲಾಮ್ ಕೇವಲ ನಿಶ್ಚಲವಾದ ವೈಯಕ್ತಿಕ ನಂಬಿಕೆ ವ್ಯವಸ್ಥೆಯಲ್ಲ; ಬದಲಾಗಿ ಅದು ಸ್ಪಂದಿಸುವಂತಹ ಒಂದು ಚಳುವಳಿ ಮತ್ತು ಕ್ರಾಂತಿಕಾರಿ ಸಾಮಾಜಿಕ ಆಂದೋಲನವಾಗಿದೆ. ಜಗತ್ತಿನಲ್ಲಿ ನ್ಯಾಯ ಮತ್ತು ಶಾಂತಿಯನ್ನು ಸ್ಥಾಪಿಸುವುದನ್ನು ಮುಸ್ಲಿಮರು ಸಾಮೂಹಿಕ ಜವಾಬ್ದಾರಿಯಾಗಿ ಕೈಗೆತ್ತಿಕೊಳ್ಳಬೇಕು. ಪ್ರಸ್ತುತ ಜಾಗತಿಕ ಪರಿಸ್ಥಿತಿ ಮತ್ತು ಭಾರತೀಯ ಸನ್ನಿವೇಶಗಳಿಗನುಗುಣವಾಗಿ ಇಸ್ಲಾಂನ ಆದರ್ಶ, ನಿಯೋಗ ಮತ್ತು ಆಂದೋಲನದ ರೂಪುರೇಖೆಯನ್ನು ಈ ಪುಸ್ತಕವು ಸಂಕ್ಷಿಪ್ತವಾಗಿ ವಿವರಿಸುತ್ತದೆ.