ಕರ್ಕರೆಯನ್ನು ಕೊಂದವರು ಯಾರು?

200.00

Category:

ತೆಲಗಿ ಹಗರಣದಂತಹ ಹಲವು ಮಹತ್ವದ ಪ್ರಕರಣಗಳನ್ನು ಬಯಲಿಗೆಳೆಯುವಲ್ಲಿ ಪಾತ್ರ ವಹಿಸಿದ್ದ ಒಬ್ಬ ಮಾಜಿ ಹಿರಿಯ ಪೊಲೀಸ್ ಅಧಿಕಾರಿ ತನ್ನ ದೀರ್ಘಾವಧಿಯ ಅನುಭವದ ನೆರವಿನೊಂದಿಗೆ ತೆರೆಯ ಹಿಂದಿದ್ದ ಸತ್ಯವನ್ನುಈ ಪುಸ್ತಕದಲ್ಲಿ ಹೊರಗೆಡಹಿದ್ದಾರೆ. ಜನರನ್ನು ದಿಗ್ಭ್ರಮೆಗೊಳಪಡಿಸುವಂತಹ ಕೆಲವು ವಾಸ್ತವತೆ ಹಾಗೂ ವಿಶ್ಲೇಷಣೆಗಳೊಂದಿಗೆ ಈ ಪುಸ್ತಕ ಹೊರಬಂದಿದೆ. ಇದು ಭಾರತದಲ್ಲಿ ಆರೋಪಿಸಲಾಗುತ್ತಿರುವ ‘ಇಸ್ಲಾಮಿಕ್ ಭಯೋತ್ಪಾದನೆ’ಯ ಹಿಂದಿರುವ ನಿಜವಾದ ಶಕ್ತಿಗಳನ್ನು ಮತ್ತು ಅವುಗಳನ್ನು ಬಯಲಿಗೆಳೆಯುವುದಕ್ಕಾಗಿ ತನ್ನ ಜೀವವನ್ನೇ ಬಲಿಕೊಟ್ಟ ಮಹರಾಷ್ಟ್ರ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆಯವರ ಹತ್ಯೆಯ ಹಿಂದೆ ಈ ಶಕ್ತಿಗಳ ಕೈವಾಡವನ್ನು ಬಹಿರಂಪಡಿಸಿದೆ. ಕರ್ಕರೆಯ ಹತ್ಯೆಯ ಹಿಂದಿನ ಕುತಂತ್ರವನ್ನು ಬಯಲಿಗೆಳೆಯುತ್ತಾ ಈ ಪುಸ್ತಕವು ಭಾರತದಲ್ಲಿ ‘ಇಸ್ಲಾಮಿಕ್ ಭಯೋತ್ಪಾದನೆ’ಯ ಆರೋಪಗಳಿಗೆ ಸಂಬಂಧಿಸಿದ ಪ್ರಧಾನ ಘಟನೆಗಳತ್ತ ಬೆಳಕುಚೆಲ್ಲಿದೆ ಮತ್ತು ಇವೆಲ್ಲ ಆಧಾರರಹಿತವೆಂಬುವುದನ್ನು ಸಾಬೀತುಪಡಿಸಿದೆ.