ಪರಿಸರ, ಅಭಿವೃದ್ಧಿ, ಇಸ್ಲಾಮ್

30.00

Category:

ಲ್ಯಾಟಿನ್ ಅಮೆರಿಕಾದಲ್ಲಿ ಪಾತರಗಿತ್ತಿಯೊಂದು ರೆಕ್ಕೆ ಬಡಿದರೆ ಆಫ್ರಿಕಾದಲ್ಲಿ ಅದೊಂದು ಚಂಡಮಾರುತವಾಗಿ ಮಾರ್ಪಡುವುದು ಎಂಬ ಮಾತೊಂದಿದೆ. ಅಷ್ಟೊಂದು ಗಾಢವಾದ ಪರಸ್ಪರ ಸಂಬಧ ಈ ಪ್ರಕೃತಿಯಲ್ಲಿ ಅಡಕವಾಗಿದೆ ಎಂದರ್ಥ. ಅತಿಯಾಸೆ ಮತ್ತು ಭೋಗಾಸಕ್ತಿಯ ಕಾರಣದಿಂದ ಮಾನವನು ಆ ಸಂಬಂಧವನ್ನು ನಾಶಪಡಿಸಿ ಪರಿಸರದ ಮೇಲೆ ಆಳವಾದ ಗಾಯವನ್ನು ಮಾಡುತ್ತಿದ್ದಾನೆ. ಸಮತೋಲನ ಮತ್ತು ಸುದೃಢ ಅಭಿವೃದ್ಧಿಗಾಗಿ ಮಾನವನು ತನ್ನ ಜೀವನ ಶೈಲಿಯಲ್ಲಿ ಬದಲಾವಣೆ ತರದಿದ್ದರೆ ಮಣ್ಣು ಆಕಾಶ, ಸಮುದ್ರ ಇವೆಲ್ಲವೂ ವಿಷಯುಕ್ತವಾಗಬಹುದು. ನಂತರ ಎಂದಿಗೂ ಮರಳಿ ಪಡೆಯದ ರೀತಿಯಲ್ಲಿ ಅವನ ವಾಸ ಸ್ಥಳವೇ ಆತನನ್ನು ನಾಶಪಡಿಸುವುದು. ಆದ್ದರಿಂದ ವಂಶ ನಾಶ ಎದುರಿಸುತ್ತಿರುವ ಗಿಳಿ, ಗಿಡ ಮತ್ತು ನದಿಯ ಅಳಲು ನಮ್ಮಲ್ಲಿ ಚಡಪಡಿಕೆಯನ್ನು ಉಂಟುಮಾಡಬೇಕು. ಅದು ಸ್ವತಃ ನಮ್ಮ ರೋದನವಾಗಿದೆ. ಈ ಸಂದೇಶವು ಈ ಕೃತಿಯಲ್ಲಿ ಮಾರ್ದನಿಸುತ್ತಿದೆ. ಮರುಭೂಮಿಯ ಪ್ರವಾದಿ(ಸ)ಗೆ ಅವತೀರ್ಣವಾದ ವಚನಗಳು ಮತ್ತು ಆ ಪ್ರವಾದಿ(ಶ) ಮತ್ತು ಅನುಚರರು ಸ್ವೀಕರಿಸಿದ ಪರಿಸರ ಪ್ರೇಮದ ನಡಾವಳಿಯನ್ನು ಅವಲೋಕನ ನಡೆಸುವ ಇಂತಹ ಕೃತಿ ಕನ್ನಡದಲ್ಲಿ ಇದು ಪ್ರಥಮ.