ಸಹಾಬಿಗಳ ಹೆಜ್ಜೆಗುರುತು

150.00

ಇತಿಹಾಸದ ಎರಡು ಮಹಾಸಾಮ್ರಾಜ್ಯಗಳ ಚಕ್ರವರ್ತಿಗಳಾದ ಕಿಸ್ರಾ, ಕೈಸರ್‌ನ ಅರಮನೆಯಿಂದ ಮರಣವನ್ನು ಅತ್ಯಂತ ಸಮೀಪದಲ್ಲಿ ಕಂಡ ಅಬ್ದುಲ್ಲಾಹಿಬ್‌ನು ಹುದಾಫ(ರ), ಪ್ರವಾದಿ(ಸ) ವರ್ಯರನ್ನು ಉಪಾಯದಿಂದ ಕೊಲ್ಲಲು ಮದೀನಾಗೆ ತೆರಳಿದ ಉಮೈರುಬುನ್ ವಹಬ್, ಮಹಾಸುಳ್ಳ ಮುಸೈಲಿಮನ ಕೋಟೆಯೊಳಗೆ ಒಂಟಿಯಾಗಿ ಎಸೆಯಲ್ಪಟ್ಟ ಬರಾಅಬ್‌ನು ಮಾಲಿಕ್(ರ), ಮದೀನಾ ಮಸ್ಲಿನ ಕಂಬಕ್ಕೆ ಬಂಧಿಸಲ್ಪಟ್ಟ ಸುಮಾಮತುಬ್ಬು ಉಸಾಲ್(ರ), ಪ್ರವಾದಿ(ಸ) ವರ್ಯರ ಹಿಜ್ರಾದ ವೇಳೆ ಅಲ್ಲಾಹನ ಆಜ್ಞೆಯಂತೆ ಪ್ರವಾದಿವರ್ಯರನ್ನು ಅತಿಥಿಯಾಗಿ ಸ್ವೀಕರಿಸಲು ಅನುಗ್ರಹೀತನಾದ ಅಬೂಅಮ್ಯೂಜಿಲ್ ಅನ್ಸಾರಿ(ರ), ತನ್ನ ಅಂಗವಿಕಲತೆಯನ್ನೂ ಲೆಕ್ಕಿಸದೆ ರಣರಂಗದಲ್ಲಿ ಮುನ್ನುಗ್ಗಿದ ವಯೋವೃದ್ಧ ಅಮ್ಯುಬ್ ನುಲ್ ಜಮೂಹ್ (ರ), ಕಂಡಲ್ಲಿ ಕೊಲ್ಲಬೇಕೆಂದು ಆಜ್ಞಾಪಿಸಲ್ಪಟ್ಟವರ ಪೈಕಿ ಮಕ್ಕಾ ಫತಹ್ ವೇಳೆ ಇಸ್ಲಾಮ್ ಸ್ವೀಕರಿಸಿದ ಅಬೂಜಹಲನ ಪುತ್ರ ಇಕಿಮ(ರ), ಮಜೂಸಿಯಾಗಿದ್ದು ನಂತರ ದೀರ್ಘಕಾಲದ ಅನ್ವೇಷಣೆಯಲ್ಲಿ ಮದೀನಾ ತಲುಪಿ ಪ್ರವಾದಿ(ಸ) ವರ್ಯರನ್ನು ಚಕಿತಗೊಳಿಸಿದ ಮತ್ತು ಇಸ್ಲಾಮ್ ಸ್ವೀಕರಿಸಿದ ಸಲ್ಮಾನುಲ್ ಭಾರಿಸಿ(ರ), ಮೊತ್ತ ಮೊದಲ ಬಾರಿ ಮಸ್ಜಿದುಲ್ ಹರಂನಲ್ಲಿ ಕುರೈಷಿಗಳ ಮಧ್ಯೆ ಸತ್ಯ ಸಾಕ್ಷ್ಯವನ್ನು ಏರಿದ ಧ್ವನಿಯಲ್ಲಿ ಘೋಷಿಸಿದ ಅಬೂದರುಲ್‌ ಗೀಫಾರೀ (ರ)… ಹೀಗೆ ಪ್ರತಿಯೋರ್ವ ಸಹಾಬಿಗಳ ಮೈನವಿರೇಳಿಸುವ ಇತಿಹಾಸದ ಚಿತ್ರಣ ಈ ಕೃತಿಯಲ್ಲಿ ಮೂಡಿಬಂದಿದೆ. ತುಂಬಾ ಸ್ವಾರಸ್ಯಕರ ಮತ್ತು ಅನನ್ಯ ಮಾದರಿ ವ್ಯಕ್ತಿತ್ವವನ್ನು ಸಾರುವ ಸಹಾಬಿಗಳ ರೋಮಾಂಚನ ಇತಿಹಾಸವನ್ನು ಮಾನವ ಪ್ರೇಮಿಗಳೆಲ್ಲರೂ ಓದಿ ಮೈಗೂಡಿಸಿಕೊಳ್ಳಬೇಕಾಗಿದೆ.
Category: