ಉಲಮಾ ಹೋರಾಟಗಾರರು

100.00

Category:

ಪ್ರವಾದಿ ವಚನ ಪ್ರಕಾರ ವಿದ್ವಾಂಸರು ಪ್ರವಾದಿಗಳ ವಾರೀಸುದಾರರಾಗಿದ್ದಾರೆ. ವಿವಿಧ ಕಾಲಗಳಲ್ಲಿದ್ದ ಪ್ರವಾದಿಗಳು ಆಯಾ ಕಾಲದ ತಮ್ಮ ಜನರು ಎದುರಿಸುತ್ತಿದ್ದ ಮುಖ್ಯ ಸಮಸ್ಯೆಗಳಿಗೆ ಹೆಚ್ಚು ಒತ್ತು ನೀಡಿದ್ದರು. ಬಹುದೇವಾರಾಧನೆ, ಆರ್ಥಿಕ ಶೋಷಣೆ, ರಾಜಕೀಯ ದಾಸ್ಯತನ, ಲೈಂಗಿಕ ಅರಾಜಕತೆ, ಪುರೋಹಿತಶಾಹಿ ಮೊದಲಾದ ಸಮಸ್ಯೆಗಳಿಗೆ ಅವರು ಇಸ್ಲಾಮಿನ ಮೂಲಕ ಪರಿಹಾರ ಕಂಡುಕೊಂಡರು. ಪೂರ್ವಿಕರಾದ ವಿದ್ವಾಂಸರು ಈ ಮಾದರಿಗಳನ್ನುಎತ್ತಿಹಿಡಿದಿದ್ದರು. ನೂರಾರು ವರ್ಷಗಳ ಕಾಲ ಕೇರಳದ ಕರಾವಳಿಯು ವಶಾಹತುಶಾಹಿ ಶಕ್ತಿಗಳ ಕೈಗಳಲ್ಲಿ ಅಮರಿಕೊಂಡಾಗ ಅಂದಿನ ವೀರವಿದ್ವಾಂಸರು ಹೋರಾಟದ ಕರೆ ನೀಡಿ ಜನರ ಮಧ್ಯೆ ಇಳಿದರು ಮತ್ತು ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಇದನ್ನು ಇತಿಹಾಸದಲ್ಲಿ ನಮಗೆ ಕಾಣಬಹುದು. ಪೂರ್ವಿಕರ ಸತ್ಯಪಥದಲ್ಲಿ ಅಭಿಮಾನವನ್ನು ತೋರ್ಪಡಿಸುವ ಆಧುನಿಕ ವಿದ್ವಾಂಸರು, ತಾವು ಕಳೆದುಕೊಂಡಿರುವ ಹೋರಾಟ ಸಂಸ್ಕೃತಿಯ ಪರಂಪರೆಯನ್ನು ಮರಳಿ ಪಡೆಯುವ ಕುರಿತಂತೆ ಆಲೋಚಿಸಬೇಕಾದ ಅಗತ್ಯವಿದೆ.